ಉಗಿಯಂತ್ರ (ಉಗಿಎಂಜಿನ್)

ಉಗಿಯಲ್ಲಿರುವ ಉಷ್ಣಶಕ್ತಿಯನ್ನು ಯಾಂತ್ರಿಕಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ (ಸ್ಟೀಂ ಎಂಜಿನ್). ಇದರ ಪ್ರಮುಖ ಬಿಡಿಭಾಗಗಳು ನಾಳಿ (ಸಿಲಿಂಡರ್) ಮತ್ತು ಅದರೋಳಗೆ ಹಿಂದಕ್ಕೂ ಮುಂದಕ್ಕೂ ಚಲಿಸಿವ ಒಂದು ಆಡುಬೆಣೆ ಕೊಂತ (ಪಿಸ್ಟನ್). ಈ ಹಿಂದು-ಮುಂದು ವಿಚ್ಛನ್ನ ಚಲನೆಯನ್ನು ವೃತ್ತಾಕಾರದ ಅವಿಚ್ಛಿನ್ನ ಚಲನೆಯಾನ್ನಾಗಿ ಮಾರ್ಪಡಿಸಲು ಆಡುಬೆಣೆಯ ದಂಡವನ್ನು ವೃತ್ತಾಕಾರದಲ್ಲಿ ತಿರುಗುವ ಒಂದು ಗಾಲಿಗ ಮುಗ್ಗುಲಿಗೆ ವಕ್ರದಂಡದ (ಕ್ರಾಂಕ್ ಶಾಪ್ಟ್) ಸಹಾಯದಿಂದ ಜೋಡಿಸಿದೆ. 

ಚಿತ್ರ-ಉಗಿಯಂತ್ರದ-ಬಿಡಿಭಾಗಗಳು

	
ಇನ್ನು ಆಡುಬೆಣೆಯ ಮೇಲೆ ಪತನವಾಗುವ ಸಂಮರ್ದ ಸಮಪ್ರಮಾಣದಲ್ಲಿ ಇರುವುದಿಲ್ಲವಾದ್ದರಿಂದ ಅದರ ಹಿಂದು-ಮುಂದು ಚಲನೆಯಲ್ಲಿ ತತ್ಪರಿಣಾಮವಾಗಿ ಗಾಲಿಯ ವೃತ್ತಾಕಾರದ ಚಲನೆಯಲ್ಲಿ ಏರಿಳಿತಗಳು ತಲೆದೋರುತ್ತದೆ. ಎಂದರೆ ಗಾಲಿಯ ಚಲನೆ ಒಂದು ನಿಯತ ದರದಲ್ಲಿ ಇರುವುದಿಲ್ಲ. ಇದನ್ನೇ ನಿಯಂತ್ರಿಸಿ, ಗಾಲಿಯ ಉರುಳಾಟವನ್ನು ಸಮವೇಗದಲ್ಲಿಡಲು ಒಂದು ಗತಿನಿಯಂತ್ರಕ ಗಾಲಿಯನ್ನು (ಪ್ಲೈವ್ಹೀಲ್) ಯಂತ್ರಕ್ಕೆ ಅಳವಡಿಸಿದೆ. ಗರಿಷ್ಠ ಸಂಮರ್ದದಲ್ಲಿರುವ ಉಗಿಯನ್ನು ನಾಳಿಯೊಳಗೆ ಬಿಡಲು ಮತ್ತು ಕಾರ್ಯವೆಸಗಿದ ಉಗಿಯನ್ನು ಹೊರಹಾಕಲು ಒಂದೊಂದು ಕವಾಟ ಇದೆ. 
	
ಉಗಿ ಯಂತ್ರಗಳನ್ನು ಏಕಮಾರ್ಗ-ಅಥವಾ-ದ್ವಿಮಾರ್ಗ-ಕ್ರಿಯೆಯ (ಸಿಂಗಲ್-ಆರ್ ಡಬಲ್-ಆಕ್ಟಿಂಗ್) ರೀತಿಯವೆಂದೂ ಮಟ್ಟಸ ಅಥವಾ ಲಂಬ (ಹಾರಿಜಾಂಟಲ್ ಆರ್ ವರ್ಟಿಕಲ್) ರೀತಿಯವೆಂದೂ ಸ್ಥೂಲವಾಗಿ ವಿಂಗಡಿಸಬಹುದು.
ಅವು ಪೂರೈಸುವ ಉದ್ದೇಶವನ್ನು ಅನುಸರಿಸಿಯೂ ಉಗಿಯಂತ್ರಗಳ ವಿಂಗಡಣೆ ಮಾಡುವುದಿದೆ.
	
ಶಕ್ತಿ ಉತ್ಪಾದನಾಯಂತ್ರಗಳಲ್ಲಿ ಮೊದಲಿನದಾದ ಉಗಿಯಂತ್ರ ಇಂದಿಗೂ ಅತ್ಯಂತ ವಿಶ್ವಾಸಾರ್ಹವಾದ ಮತ್ತು ಸರಳವಾದ ಏಕೈಕ ಯಂತ್ರ. ಅಂತರ್ದಹನ, ಉಗಿತಿರುಬಾನಿ ಮುಂತಾದ ಯಂತ್ರಗಳ ಉಗಿ ಯಂತ್ರದ ಬಳಕೆ ಗಮನಾರ್ಹವಾಗಿ ಕುಂಠಿತವಾಗಿದೆ. ಆದರೆ ಅಗ್ಗದ ಉರುವಲು ಲಭಿಸುವಲ್ಲಿ ಉಗಿ ಯಂತ್ರವೇ ಹೆಚ್ಚು ಉಪಯುಕ್ತ ಮತ್ತು ಲಾಭದಾಯಕ.          
												
(ಎಚ್.ಎಲ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ